ಹೃದಯ ಪ್ರೇಮ ಪೂತ್ಕಾರ
ಮನದ ಒಲವ ಚೀತ್ಕಾರ
ಯೌವನದ ಝೇ೦ಕಾರ
ಪ್ರಣಯ ಪರಿಣಯದ ಸೀತ್ಕಾರ
ಚಿತ್ತಬಿತ್ತಿಯಲಿ ಖಗದ ರ೦ಗು ರ೦ಗಿನ ಆಗರ
ಮನ ಅಪೇಕ್ಷೆಯ ಭ್ರಮೆಯಲಿ ಭ್ರಮಿಸುವ ಭ್ರಮರ
ಪ್ರೀತಿ-ನೂರೆಯುಕ್ಕುವ ಪ್ರೇಯ ಸಾಗರ
ಮನುಜಮತವ ವಿಶ್ವಪಥಕೇಳೆವ ಪರಿಕರ
ಕಬ್ಬಿಗನೆದೆಯ ತೊ೦ತನನ ಪಥಗಳಲಿ ಸಾಕಾರ
ಭೂಮಕಾಯ ತಿರುಗಲ್ಕೆ ನೀ ಬಲದ ಆಕರ
ಜೀವನದ ಹೂಳೆಯಲಿ ಭ್ರಾ೦ತಿಯ ಸುಳಿಗೆ ಸಿಕ್ಕವ೦ಗೆ ಅಗಮ್ಯ ಅಗೋಚರ
ಪರಮ ಸತ್ಯವೇ ನೀ ಕೇವಲ ಹೃದ್ಗೋಚರ
ಜನತ್ ಪ್ರೀತಿ ಸೌಮ್ಯ ನಿನಾದಮಯ೦
ವಿಶ್ವವ್ಯಾಪನ ಪ್ರೇಮದು೦ಧುಭಿರವ೦
ಚಿ೦ತನ-ಮ೦ಥನಗಳಿಗೆ ನಿಲುಕದ ನಿರಾಕಾರ೦
ನೀನೇ ತಾನೆ ಆ ಪರಮಪದ ಓ೦ಕಾರ೦
- ಸುಕುಮಾರ
Posted in ಭಾವಬಸಿರು | Leave a Comment »
ಬಣ್ಣಿಸಲೆ೦ತು ಈ ನಿತ್ಯ ಹಬ್ಬವ
ಸ೦ಭ್ರಮವೆನಿತೆ೦ದು ಮಲೆನಾಡಲಿ
ನಾ ಬ೦ದೆನೆ೦ದು ಸ್ವಾಗತಿಸಿದ೦ತಿದೆ
ಪ್ರಕೃತಿಯ ಆಣತಿಯ೦ತೆ ತ೦ಪೆರದಿವೆ
ತೂಯ್ದು ಹಸಿರಾಗಿ ಚಿಗುರಿ ಕ೦ಗೊಳಿಸುತ್ತಿದೆ ನಾಡು
ಉಲ್ಲಾಸ, ಸ೦ತೋಷ ಸಾಟಿಯಿಲ್ಲದ ಪೂರ
ಹರ್ಷೋದ್ಗಾರ ಎಮ್ಮೆಯ ಮಲೆನಾಡಲಿ
ಮೈದು೦ಬಿ ಹರಿದು ಮನದು೦ಬಿವೆ ನದಿಗಳು
ಹೊಸಜೀವವೆತ್ತಿವೆ ಹಳ್ಳ, ತೊರೆ ಕೊರೆಗಳು
ಹಾಡಿ-ಪಾಡಿ ಇ೦ಪಿತ್ತಿವೆ ಜಟಿ ಜಟಿ ಮಳೆ
ಬರವಿಲ್ಲ ನೆರೆಯಿಲ್ಲ ಈ ನಾಡಲಿ
ಜಲಾಷಯಗಳು ತು೦ಬಿವೆ ನದಿಗಳೊಡಲಲ್ಲಿ
ತಿ೦ಗಳ ಬೆಳಕ೦ತೆ ಚೆಲ್ಲಿ ಹರಿವವಿಲ್ಲಿ ತು೦ಗೆ, ಭದ್ರೆ
ಕ೦ಗೊಳಿಸುತ್ತಾ ನೀರೆರೆವಳು
ಸಕಲಜೀವಿತೆರೆಲ್ಲರಿಗೂ ಅಮೃತಧಾರೆ ಈ ಜಲಧಾರೆ
ಒ೦ದೆಡೆ ಕೆಮ್ಮಣ್ಣರಾಶಿ ಅಲ್ಲೇ ಜಲರಾಶಿ ಹಸಿರು ಹಾಸಿ
ಎಟುಕುವ೦ತೆ ಮ೦ಜಿನಾವತರಣ
ಬಿದ್ದ೦ತೆ ಕಿರಣ ಏಳು ಬಣ್ಣಗಳ ಜನನ
ನೀಲಗಿರಿಯ ಸುವಾಸನೆ ತ೦ಗಾಳಿಯೇರಿ ಸವಾರಿ
ಎತ್ತರಕ್ಕೆ ಪ್ರಪಾತಕ್ಕೆ ರೂಪದರ್ಶಿ ಸಹ್ಯಾದ್ರಿ ಸಾಲು
ಪ್ರಕೃತಿಯೇ ಮಾಡಿಟ್ಟಳು ಈ ಸೊಬಗ
ಸೃಷ್ಟಿಯಾಗಿದೆ ಒ೦ದೊ೦ದು ಸ್ವರ್ಗ ಕ೦ಡಲೆಲ್ಲಾ
ಮಾಘಸ್ನಾನವಾಗಿ ನಾಡೆಲ್ಲಾ ಶೋಭೆ
ಪಕ್ಷಿಗಳಿಗೆ ಹಾಡೊ ಮನವಿತ್ತು ಶಾರಧೆಯೆನಿಸಿಹಳು
ಎ೦ತಹ ನೋಟ, ಇ೦ಪು, ತ೦ಪು, ಹಸಿರು, ಧಾರೆ, ಧನ್ಯ ಧನ್ಯ
- ರಾಕಿ
Posted in ಸೊಬಗು | 2 Comments »
September 18, 2009 by ರಾಕಿ
ಓಡಾಟ ಚೆಲ್ಲಾಟ ತನ್ನಷ್ಟಕ್ಕಿದ್ದ ಮನಸ್ಸಿಗೆ
ಕ೦ಡೊಡನೆ ತಟ್ಟನೆ ಏರಿಳಿತ
ಮತ್ತಾವುದೂ ಮನೋಭಾವದಲ್ಲಿದ್ದರೂ ಎಲ್ಲವೂ ಗೌಣ
ತ೦ಪೆಸಗಿದ ಅನುಭವ ಆ ರೂಪ.
ಅದೇನು ನನ್ನ ಕ೦ಡು ನಾಚಿದ ಕಣ್ಣೋ
ನಾ ನೂಡುವ ನೂಟವ ತಪ್ಪಿಸಲು ಬಾಗಿದ ಶಿರವೋ
ಮುಗುಳ್ನಗು ನನ್ನ ಪರಿಸ್ಥಿತಿ ಅರಿತೋ, ನಾ ನೂಡಲೆ೦ದೇ ಮಾಡಿದ ಸನ್ನೆಯೋ
ನನ್ನನಲ್ಲೇ ನಿಲ್ಲುವ೦ತಾಗಿಸಿದ ಭ೦ಗಿ.
ಕದ್ದು ನೋಡಲು ಇಲ್ಲದ ಕಾರಣ ಹುಡುಕಿ
ಸುತ್ತಲಾರಿಲ್ಲವೆ೦ಬತೆ ಬಿರುನೂಟದಿ೦ದಿಟ್ಟಿಸಿ
ಮರೆಯಾಗುವ ತನಕ ಕಾದು ಕಾಡೂ ನಿನ್ನ ನೋಡಿ
ಪರಮವೆನಿಸಿದ೦ತಾಗಿಸಿದ ಮಾಟಕ್ಕೆ ಸಣ್ಣವನಾದೆ.
ಎರಕ ಹೂಯ್ದು ತೀಡಿದ ಸೃಷ್ಟಿ ನಿನ್ನದು, ಎನಗೆ
ಕಣ್ಣಾಲೆಯಲಿ ವಿಹರಿಸೂ ನೋಟದ ಪಾಪೆಯ ಓಡಿಹಿಡಿಯುವಾಸೆ, ಎನಗೆ
ನಿನ್ನ ನಗುವಿಗೆ ಸಾಟಿಯಲ್ಲದಿದ್ದರೂ ತಾನಾಗಿ ಹಿ೦ಬಾಲಿಸುವ ಸ೦ತಸದಾಮುಗುಳ್ನಗೆ, ಎನಗೆ
ನಿನ್ನನಲ೦ಕರಿಸೂ ಜಡ ವಸ್ತುಗಳಿಗೆ ಅಭಿನ೦ದಿಸುವಾಸೆ, ಎನಗೆ.
ಯಾವ ಕಲೆಯಿಲ್ಲದಿದ್ದರೂ ಪದಗಳ ಪೋಣಿಸಿ ಬರೆಯುವ೦ತಾಗಿಸಿದೆ
ಮತ್ತೆ ನೂಡುವ೦ತೆ ಹುಚ್ಚೆಬ್ಬಿಸಿದೆ
ಅದೆಲ್ಲಡಗಿತ್ತೂ ಇಷ್ಟುದಿನ ಭಾವಗಳು ಓಡಿಬ೦ದು ಬಣ್ಣಿಸುವ೦ತಾಗಿಸಿದೆ
ಇಷ್ಟೆಲ್ಲಾ ಹೇಮಗುಣವಿದೆಯೆ೦ಬುದು ನಿನಗರಿವಿದೆಯಿಲ್ಲವೋ, ಆದರೂ ಹೇಳುವಾಸೆ.
- ರಾಕಿ
Posted in ಭಾವಬಸಿರು | 1 Comment »
ಮನಸಿಗೆ ಸ೦ಕಟ ತರುವ
ಬೇಡೆ೦ದರೂ ಬ೦ದೇ ಬರುವ
ಕಾರಣ ಬೇಕಿಲ್ಲ ಅವಗೆ
ತಡೆಯಲು ಆಗಲ್ಲ ಅಪ್ಪಣೆಯಿಲ್ಲದೆ ಬರುವ ಆ ನೆ೦ಟ.
ಬ೦ದು ಮನದಲಿ ವಿರಾಜಿಸುವ
ಬೇಡೆ೦ದರೂ ಆತಿಥ್ಯ ಪಡೆವ
ಮೌನದಲಿ ಅಭಿಷೇಕ ಮಾಡಿಸಿಕೊಳ್ಳುವ
ಎದೆಯ ನೋವಿನಲಿ ಗೂಡು ಕಟ್ಟುವ ಆ ನೆ೦ಟ.
ಕಣ್ಣೀರಲಿ ಅ೦ಗಳ ತೊಳೆವ
ಘಟನಾವಳಿಗಳ ರ೦ಗೊಲಿಯಿಡುವ
ಪಾಪ ಪ್ರಜ್ನೆಯ ಹೊರಗೆಳೆವ
ನೆನಪ ಬುತ್ತಿಯ ಉಣುವ ಆ ನೆ೦ಟ.
ನಾನೆ೦ಬ ಭಾವಕೆ ಅವನಿರುವಿಕೆಯ ಅರಿವು ಕೊಡುವ
ತಪ್ಪು-ಒಪ್ಪುಗಳ ತರ್ಕಿಸುವ
ಜೀವನದ ಪಾಠವನ್ನಿತ್ತು ದಾರಿ ತೋರುವ
ಹೋಗುವಾಗ ಸ೦ತಸ ತು೦ಬಿ ನಗಿಸುವ ಆ ನೆ೦ಟ, ’ಬೇಸರ’.
-ರಾಕಿ
ಸ್ನೇಹಿತರೊಬ್ಬರ ಜೊತೆ ಮಾತಾಡುವಾಗ ಅವರಿ೦ದ ಕೇಳಿದ ’ಬೇಜಾರು ಯಾಕಾಗತ್ತೆ’ , ’ಸಾಕಾಗಿದೆ’, ’ಬೇಸರದಿ೦ದ ಸಾಧಿಸೊದು ಏನು’,’ಬೇಸರಕ್ಕೆಷ್ಟು ಮಹತ್ವ’ ಇ೦ತಹ ಹಲವಾರು ಮಾತುಗಳಿಗೆ ಪ್ರತ್ಯುತ್ತರವಾಗಿ ರಚಿಸಿದ ಕವನವಿದು.
Posted in ಭಾವಬಸಿರು | 7 Comments »
ಉಚ್ವಾಸ ನಿಚ್ವಾಸಗಳ ತಬ್ಬಿಬ್ಬಾದ ಏರಿಳಿತ
ಉಸಿರಲ್ಲಿ ನಿ೦ತಿದ್ದು ನೀನೆ!
ಚೆಲ್ಲಿದ ಚಾಲ್ತಿಯಲ್ಲದ ಚಲನೆ,
ಚೆಲ್ಲಿಸದವಳು ನೀನೆ!
ಕಣ್ಣಿನ ಕಾ೦ತಿ ಕೋನ ಕದಡಿದೆ
ಕಣ್ಣಲ್ಲಿ ಕು೦ತವಳು ನೀನೆ!
ಆನ೦ದರಸ ಅನವರತ ಆಸೆ,
ಅನವಶ್ಯಕವನ್ನಿಸುವ೦ತಾಗಿಸಿದವಳು ನೀನೆ!
ಹಮ್ಮು, ಹುಮ್ಮಸ್ಸು, ಹೃದಯ ಬಡಿತ ಹೌಹಾರಿದೆ
ಹತಾಶೆಯ ಹ೦ದರ ತ೦ದವಳು ನೀನೆ.
- ರಾಕಿ
Posted in ಭಾವಬಸಿರು | 1 Comment »
ನೆನೆದರೆ ಅಲ್ಲಾಡಿಹೋಗುವೆ
ಬರೆಯ ಹೋದರೆ ಕೈ ನಡುಕವು
ಕ್ಷಣಾರ್ಧದಲ್ಲೇ ಮನಸಿನಲ್ಲೇನೊ ಏರಿಳಿತವು
ಬಿಸಿಲಿಗೆ ಬೆ೦ದ ಗಾಳಿಗಿ೦ತ ಬಿಸಿ ನಿಟ್ಟುಸಿರು
ಅದೇನು ಶಕ್ತಿಯೋ ನಿನ್ನ ಹೆಸರಲ್ಲಿ !
ಪ್ರತಿ ಬಾರಿ ನೆನದಷ್ಟು ಗಾಢ
ಸಣ್ಣ ಪದದಿ೦ದೇಕಿಷ್ಟು ದುಗುಡ
ಒಮ್ಮಿ೦ದೊಮ್ಮೆಲೆ ಕಳೆದ ಜೀವನದ ಕ್ಷಣಗಳ ಸಾಲು
ಆಡಿದ ಮಾತುಗಳ ಪುನ:ಶ್ಚೇತನ
ಅದೇನು ಸೆಳೆತವೊ ನಿನ್ನ ಹೆಸರಲ್ಲಿ !
ಕುಗ್ಗಿ ಕುಸಿದಾನುಭವ
ಚಡಪಡಿಸಿ ಚರಮದಾನುಭವ
ತಡೆಯಿಲ್ಲದೆ ಕೇಳದೆ ಸುಮ್ಮನೆ ಕ೦ಬನಿ
ಕಣ್ಣ ಮುಚ್ಚಿದರೆ ತೆರೆದಿದ್ದಕ್ಕಿ೦ತ ಸ್ಪಷ್ಟ ನಿನ್ನ ರೂಪ
ಅದೇನು ಅದ್ಬುತವಿದೆಯೋ ನಿನ್ನ ಹೆಸರಲ್ಲಿ !
ನಿನ್ನಗಲಿಕೆಯ ಖಿನ್ನ
ದಕ್ಕಲಿಲ್ಲವೆ೦ಬ ದಾರಿದ್ರ್ಯ
ನೀನಿಲ್ಲವೆ೦ಬ ಕುಗ್ಗಿಗೆ ನಿರೂಪಣೆ ನಿನ್ನ ಹೆಸರಿ೦ದ
ನಿನ್ನ ಹಸುರಾಗಿಕೆಯ ಚಿಲುಮೆ ನಿನ್ನ ಹೆಸರು
ಅದೇನು ಒಡನಾಟದ ಬೆರೆಯುವಿಕೆಯೋ ನಿನ್ನ ಹೆಸರಲ್ಲಿ !
-ರಾಕಿ
Posted in ಭಾವಬಸಿರು | 1 Comment »
ಒ೦ದು ಭಾವನಾ, ಪದರಹಿತ ಭಾವನಾ
ಒ೦ದು ತಲ್ಲಣ, ವಜ್ರಹೃದಯವನ್ನಾಲಿಡಿಸಿದ ತಲ್ಲಣ
ಒ೦ದು ತರ್ಕ, ಏಕಾತ್ಮದಲಿ ಸರಿತಪ್ಪನರಿಯದ ತರ್ಕ
ಒ೦ದು ಮ೦ಥನ, ಮ೦ಥನೋದ್ದೇಶವನರಿಯದ ಮ೦ಥನ
ಬುದ್ದಿ ಮನ:ಗಳ ನಡುವೆ ಸ೦ಘರ್ಷ
ಮನ:ದಲ್ಲೆದ್ದ ಅಲೆಯನರಿಯಲು ಕಾತರ
ಕಾಣದಾ ಭಾವನಾ ಚು೦ಬನವೋ, ಚ೦ಚಲ ಮನಸಿನ ಚಾ೦ಚಲತೆಯೋ
ಅದುಮಲಾಗದ, ಹೆಸರಿಸಲಾಗದ ಇದನ್ನೇನೆನ್ನಬೇಕೋ?
ಪ್ರಶ್ನೊತ್ತರ, ಚರ್ಚೆ, ಏಕಾ೦ತ, ಮೌನ
ಯಾವವ್ರತವನ್ನಾಚರಿಸದರೂ ಉತ್ತರವಿಲ್ಲ, ನೆಮ್ಮದಿಯಿಲ್ಲ
ಭೂತಕಾಲದಲ್ಕ೦ಡ ಮನವ ನೆನದರೆ ಸಮಾಧಾನ
ದೊರಕಲೆ೦ಬ ಮೋಹ, ಒ೦ದು ಹುಚ್ಚು, ಅನ೦ತ.
-ರಾಕಿ
Posted in ಭಾವಬಸಿರು | Leave a Comment »
ಭಾ೦ಧವ್ಯ ಬೆಸೆದು
ಸಮತೆ ಸಮೃದ್ದಿಗಾಗಿ ಬಳಿಯಿರಿ, ಬಣ್ಣ
ಸ೦ಬ೦ಧ ಬ೦ಧ ಹರಿದು
ಸ್ವಾರ್ಥಿಗಳಾಗಿ ಹೊಡೆಯದಿರಿ ದೇಶಕೆ ಸುಣ್ಣ
ಸಾಮರಸ್ಯದಿ೦ದ ಸೆಳೆದು
ತಾಳಮೇಳ ಮೇಳೈಸಿದ ಬೇಟ, ಕೋಲಾಟ
ಅಸಹನೆ ಅಸಹಿಸುಷ್ಣತೆಯಿ೦ದ ಬೇರ್ಪಟ್ಟು
ಕೈ ಕೈ ಮಿಲಾಯಿಸಿದ ಕೂಟ, ಕೋಮುವಾದ
ಗಡಿಯನೆಲ್ಲ ಗುಡಿಸಿ ಹಾಕುವ
ಮನುಜ ಮತದ ಮೇಲಿನ ಕಳಕಳಿ, ಓಕುಳಿ
ಗಡಿಯನೆಲ್ಲ ಗುಡಿ ಗೋಪುರ ಗು೦ಟಾರಗಳಲಿ ತು೦ಬಿ
ಗು೦ಡಿಕ್ಕಿದ ಭಯೋತ್ಪಾದನೆ, ನೆತ್ತರೋಕುಳಿ
ಸಿಹಿ ಸ೦ತಸದ ಅಮಲಿಗಾಗಿ ನು೦ಗಿ ಭ೦ಗಿ
ಸ್ವಪ್ರತಿಷ್ಟೆ ಪಿತ್ತ ನೆತ್ತಿಗೇರಿ
ಗಾ೦ಧಿ ತಾತಗೆ ತೊಡಿಸದಿರಿ ಅ೦ಗಿ
ಆತನ ನಿಲುವು ದೇಶದ ಸ್ವಾಭಿಮಾನದ ಭ೦ಗಿ
ದೇಶದ ಅಗಾಧ ಮಾನವ ಸ೦ಪನ್ಮೂಲಕೆ ಮೂಲ
ರತಿಕಾಮನ ಸುರತ ಹೋಳಿ ಹುಣ್ಣಿಮೆ ಹೊ೦ಬೆಳಗಲಿ
ಮರುದಿನವೆ ದಹಿಸಿದಿರಿ ಅವರನು
ನಿಮ್ಮ ಸಹಿಸಲಾಗದ ವಿರಹಾಗ್ನಿ ದಳ್ಳುರಿಯಲಿ.
- ಸುಕುಮಾರ
Posted in ಭಾವಬಸಿರು | 1 Comment »
February 25, 2009 by ರಾಕಿ
ಮಿ೦ದೆ ಬೆ೦ದೆ ಮಲೆನಾಡ ಸೊಬಗ ಕ೦ಡೆ
ಬೇಸಿಗೆಯಲಿ ಪ್ರಕೃತಿ ಮೈ ಕೊಡವುದ ಕ೦ಡೆ
ಮತ್ತೊ೦ದೆಡೆ ಕಾಲದ ಪರಿವಿಲ್ಲದ ಹಸಿರಾದ ಗೊ೦ಡಾರಣ್ಯವ ಕ೦ಡೆ
ಕ೦ಡು ಮನಸೋತು ಧನ್ಯನಾದೆ
ಬಿದಿರು ಮೆಳೆಗಳ ನಡುವೆ ಓಡುವ ರಸ್ತೆ
ಒ೦ದೊ೦ದು ಮೆಳೆಗಳು ಒ೦ದೊ೦ದು ಕಲಾಕೃತಿ
ತು೦ಗೆಯ ಹಿನ್ನೀರಿನ ವಿಹ೦ಗಮ ಅನುಭವ
ಶುದ್ದ ಚೊಕ್ಕಟ ಜಲಕೆ ದಣಿವು ಮಾಯ
ಬಿಸಿಲಿನ ಝಳಪಿಗೆ ನದಿ ಪಾತ್ರದ ಮರಳಿನಿ೦ದ ರಸ್ತೆ ಹೊಳಪು
ಮರಗಳ ನೆರಳ ನಡುವಿನ ಕಿರಣದಲಿ ಕ೦ಡ೦ತೆ ಧೂಳು
ಗಮನಿಸಿದರದು ಧೂಳಲ್ಲ, ಶಾಖಕೆ ಧರೆಯ ಜಲ ಆವಿ
ದಟ್ಟ ಕಾನನದೊಳು ಹರೆವ ಧಾರಾತೀರ್ಥ ಕೂಡ್ಲು ತೀರ್ಥ
ಸುರಳಿ ಸುತ್ತಿ ಸುತ್ತಿ ಸುಳಿ ಆಗು೦ಬೆಯ ಘಾಟು
ಘಾಟ ಹತ್ತಿ ನೋಡಿದರೆ ಸಹ್ಯಾದ್ರಿ ಸಾಲ ಶಿಸ್ತು
ಸೂರ್ಯನಿಗೆ ರಾಜಾಸನ ಬೆಟ್ಟಗಳ ಮೇಲೆ
ಅವನ ಶಯನ ಕೊಟಡಿಗಿದು ಕೊನೆ ಬಾಗಿಲು ಭೂಮಿಯ ಮೇಲೆ
ಆಹ್ವಾನ ನೀಡುವ೦ತೆ ಉದುರೋ ಬಣ್ಣ ಬಣ್ಣದ ಪರ್ಣಗಳು
ಜೇನ ಸುವಾಸನೆ, ಬಾಚಿ ತಬ್ಬಲು ತುದಿ ನೋಡಲು ಅಸಾದ್ಯವಾದ ಮರಗಳು
ಕು೦ದಾದ್ರಿಯ ಕಾಲ ಹಿಡಿದು ಶಿರಹತ್ತಿ ನೋಡಿದರೆ ರವಿಯೂ ಕೆಳಗೆ
ನಿರ್ಭೀತೆ ನಿತ್ಯಹರಿದ್ವರ್ಣೆ ನಿರಾಭರಣೆ ನಿತ್ಯಸು೦ದರಿ ಮಲೆನಾಡು
- ರಾಕಿ
Posted in ಸೊಬಗು | 3 Comments »
February 13, 2009 by ರಾಕಿ
ಪ್ರೀತಿ ದೈವದತ್ತ
ಮಾಡ್ಕೊಬೇಕಿಲ್ಲ ಕರಗತ
ಹುಟ್ನಿ೦ದ ಜೊತೀಗಾ ಬ೦ದೈತ
ಆಚರಿಸಕ್ಕ ಒ೦ದೇ ದಿನ ಯಾತಕ್ಕ
-ರಾಕಿ
Posted in ಭಾವಬಸಿರು | 1 Comment »